``O2``ಜೀವರಕ್ಷಕ ಅನಿಲದಿಂದ ಜೀವ ಉಳಿಸೋ ಪ್ರಯತ್ನ...ರೇಟಿಂಗ್: 3.5/5 ****
Posted date: 20 Sat, Apr 2024 08:47:05 AM
ಚಲನಚಿತ್ರ:    O2
ನಿರ್ಮಾಪಕ:  ಅಶ್ವಿನಿ ಪುನೀತ್ ರಾಜ್‌ಕುಮಾರ್
ನಿರ್ದೇಶಕ:     ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್
ತಾರಾಗಣ:     ಆಶಿಕಾ ರಂಗನಾಥ್, ಪ್ರವೀಣ್ ತೇಜ್, ಸಿರಿ ರವಿಕುಮಾರ್, ಪುನೀತ್ ಬಿ ಎ, ಪ್ರಕಾಶ್ ಬೆಳವಾಡಿ, ‘ಸಿದ್ಲಿಂಗು’ ಶ್ರೀಧರ್ ಮತ್ತು ಇತರರು

ಪುನೀತ್ ರಾಜ್‌ಕುಮಾರ್  ಇಷ್ಟಪಟ್ಟ ಕೊನೇ ಕಥೆ  0 2. ಕಳೆದ ಕೆಲ ವರ್ಷಗಳಿಂದ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ  ಸಾಕಷ್ಟು ಆವಿಷ್ಕಾರಗಳು ನಡೆದಿವೆ. ಉಸಿರು ನಿಲ್ಲಿಸಿದ ವ್ಯಕ್ತಿಯನ್ನು ಮತ್ತೆ ಬದುಕಿಸುವುದು ಹೇಗೆ ಎಂಬುದು ಮನುಕುಲಕ್ಕೆ ಇನ್ನೂ ಕಂಡುಹಿಡಿಯಲು ಸಾಧ್ಯವಾಗದ ಒಂದು ವಿಷಯ. ಸತ್ತವ್ಯಕ್ತಿಯಲ್ಲಿ  ಜೀವ ತುಂಬುವುದು ಸಾಧ್ಯವೇ? ಇಂಥ ಮಹತ್ವದ ವಿಷಯದ ಬಗ್ಗೆ `O2` ಚಿತ್ರ ಮಾತನಾಡುತ್ತದೆ.
 
ವೈದ್ಯೆ ಡಾ.ಶ್ರದ್ಧಾ(ಆಶಿಕಾ ರಂಗನಾಥ್) ಅವರ ಸುತ್ತ ನಡೆಯುವ ಕಥೆ. 18 ನೇ ವಯಸ್ಸಿನಲ್ಲಿ ಭಾರತದ ಎರಡನೇ ಕಿರಿಯ ವೈದ್ಯೆಯಾದ ಡಾ.ಶ್ರದ್ದಾ  ಆಮ್ಲಜನಕದ ವಿತರಣೆಯಿಂದ ಸತ್ತವರನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಸಂಶೋಧನೆ ನಡೆಸುವ ಬಗ್ಗೆ ಸಂಶೋಧನೆ  ಮಾಡುತ್ತಿದ್ದಾರೆ. ಜೀವಂತ ವ್ಯಕ್ಯಿಗಳ ಮೇಲೆ ಆ ಸಂಶೋಧನೆಯನ್ನು ಪ್ರಯೋಗಿಸಲು ವೈದ್ಯಕೀಯ ಮಂಡಳಿಯಿಂದ  ಅನುಮತಿ ಪಡೆಯುವುದು ಕಷ್ಟ. ಆಕೆಯ ಈ  ಪ್ರಯೋಗಗಳು ಯಶಸ್ವಿಯಾಗುತ್ತವೆಯೇ ಮತ್ತು ಮಾನವರ ಮೇಲೆ ಆ ಪ್ರಯೋಗಗಳನ್ನು ಮಾಡಲು ಆಕೆಗೆ ಅನುಮತಿಯನ್ನು ನೀಡಲಾಗುತ್ತದೆಯೇ? ಎಂಬುದನ್ನು ಈ ಚಿತ್ರ. ನಿರೂಪಿಸುತ್ತದೆ.
ಈ ಮಧ್ಯೆ,  ಒಂದು ಪ್ರೇಮಕಥೆಯೂ  ಹಾದು ಹೋಗುತ್ತದೆ.  ಶ್ರದ್ಧಾಳ  ಜೀವನದಲ್ಲಿ ವಿಬ್ಬರು ವ್ಯಕ್ತಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಅವರಲ್ಲಿ  ಒಬ್ಬರು ಆಕೆಯ ಈ  ಅಧ್ಯಯನಕ್ಕೆ ಸಹಾಯ ಮಾಡುವ  ಡಾ ದೇವ್ (ಪ್ರವೀಣ್ ತೇಜ್)
ಮತ್ತೊಬ್ಬರು ಶ್ರದ್ಧಾಳನ್ನು ಪ್ರೀತಿಸುವ ರೇಡಿಯೋ ಜಾಕಿ ಓಶೋ (ರಾಘವ ನಾಯಕ್).
 
`O2` ಒಂದು ಮೆಡಿಕಲ್  ಥ್ರಿಲ್ಲರ್ ಚಿತ್ರವಾಗಿದ್ದು, ಬಿಗಿಯಾದ ಚಿತ್ರಕಥೆ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ, ಸಾಮಾನ್ಯ ಜನ ಇಂಥ ಕಥೆಯನ್ನು  ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟಕರವಾದರೂ ಮನುಕುಲಕ್ಕೆ ಪೂರಕವಾದ ಕಾನ್ಸೆಪ್ಟ್ ಅಂತ ಯೋಚಿಸಿದರೆ ಖಂಡಿತ ಮೆಚ್ಚಿಕೊಳ್ಳುತ್ತಾರೆ, ಜನರೂ ಈಗ ಸಾಕಷ್ಟು ಅಪ್  ಡೇಟ್ ಆಗಿದ್ದಾರೆ. ಹೊಸತನದ ಕಥೆ ಹಾಗೂ ನಿರೂಪಣೆ ಈ ಚಿತ್ರದ ಹೈಲೈಟ್ ಎನ್ನಬಹುದು. 
 
ಹೆಚ್ಚಾಗಿ ಲವ್ ಸ್ಟೋರಿ ಸಿನಿಮಾಗಳಲ್ಲೇ  ಕಾಣಿಸಿಕೊಳ್ಳುವ ಆಶಿಕಾಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶವಿರೋ ಪಾತ್ರವಿದೆ. ತಾನೊಬ್ಬ  ಪ್ರತಿಭಾವಂತ ನಟಿ ಎಂಬುದನ್ನು  ಆಕೆಯಿಲ್ಲಿ  ನಿರೂಪಿಸಿದ್ದಾರೆ. ರಾಘವ ನಾಯಕ್ ತೆರೆಯ ಮೇಲೆ ಸಹಜವಾಗಿ ಕಂಡರೆ, ಪ್ರವೀಣ್ ತೇಜ್ ಗಮನ ಸೆಳೆಯುತ್ತಾರೆ. ಉಳಿದಂತೆ  ಸಿರಿ ರವಿಕುಮಾರ್, ಪುನೀತ್ ಬಿಎ, ಪ್ರಕಾಶ್ ಬೆಳವಾಡಿ, ಸಿದ್ಲಿಂಗು ಶ್ರೀಧರ್ ಸಿಕ್ಕ ಅವಕಾಶದಲ್ಲೇ ಉತ್ತಮ‌ ಅಭಿನಯ ನೀಡಿದ್ದಾರೆ.
 
ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಪ್ರಥಮ ಪ್ರಯತ್ನದಲ್ಲೇ  ಅತ್ಯುತ್ತಮ ಕಂಟೆಂಟ್ ಆಯ್ಕೆ ಮಾಡಿಕೊಂಡಿದ್ದಾರೆ. ಸಂಗೀತ ಮತ್ತು ಕ್ಯಾಮೆರಾ ವರ್ಕ್ ಚಿತ್ರಕಥೆಯ ಓಟಕ್ಕೆ ಸಾಥ್ ನೀಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed